ಶಕೀಲಾ ಇಂದ್ರಜಿತ್ ಲಂಕೇಶ್ ಬರೆದು ನಿರ್ದೇಶಿಸಿದ 2020 ರ ಚಲನಚಿತ್ರವಾಗಿದೆ . ಚಿತ್ರವು 1990 ರ ದಶಕದಲ್ಲಿ ಭಾರತದಲ್ಲಿ ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಯ ವಯಸ್ಕ ಚಿತ್ರಗಳಲ್ಲಿ ನಟಿಸಿದ್ದ, ನೆಲ್ಲೂರು, ಆಂಧ್ರ ಪ್ರದೇಶದ ನಟಿಯ ಪಾತ್ರದಲ್ಲಿ ರಿಚಾ ಚಡ್ಡಾ ,ಮತ್ತು ಪೋಷಕ ಪಾತ್ರಗಳಲ್ಲಿ ಪಂಕಜ್ ತ್ರಿಪಾಠಿ ಮತ್ತು ರಾಜೀವ್ ಪಿಳ್ಳೈ ನಟಿಸಿದ್ದಾರೆ . ಚಿತ್ರವನ್ನು ಸ್ಯಾಮಿ ನನ್ವಾನಿ ಮತ್ತು ಸಾಹಿಲ್ ನನ್ವಾನಿ ನಿರ್ಮಿಸಿದ್ದಾರೆ. ಶಕೀಲಾ 25 ಡಿಸೆಂಬರ್ 2020 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. == ಪಾತ್ರವರ್ಗ == ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ಪಂಕಜ್ ತ್ರಿಪಾಠಿ ಸೂಪರ್ ಸ್ಟಾರ್ ಆಗಿ ಆಂಟನಿ ಪಾತ್ರದಲ್ಲಿ ರಾಜೀವ್ ಪಿಳ್ಳೈ ಯುವ ಶಕೀಲಾ ಪಾತ್ರದಲ್ಲಿ ಕಾಜೋಲ್ ಚುಗ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಶೀವ ರಾಣಾ ಅಹಾನಾ ಆಗಿ ಅಹಾನಾ ಕೋಚಾರ್ ಆರುಮುಗಂ ಆಗಿ ಸುಚೇಂದ್ರ ಪ್ರಸಾದ್ ಸಲೀಂನ ನಿರ್ದೇಶಕರಾಗಿ ವಲೇರಿಯನ್ ಮೆನೆಜಸ್ == ನಿರ್ಮಾಣ == ಲಂಕೇಶ್ 2019 ರಲ್ಲಿ ಚಿತ್ರದ ಕೆಲಸ ಆರಂಭಿಸಿದರು ರಿಚಾ ಚಡ್ಡಾ ಅವರು ತಮ್ಮ ದೃಶ್ಯಗಳನ್ನು ಮಾಡಲು ಇನ್ನೊಬ್ಬರ ದೇಹವನ್ನು ಬಾಡಿಗೆಗೆ ಪಡೆದಂತಹ ಅನೇಕ ಸಂಗತಿಗಳನ್ನು ಶಕೀಲಾ ಅವರ ಬಗ್ಗೆ ತಾವು ತಿಳಿದುಕೊಂಡುದಾಗಿ ಸಂದರ್ಶನವೊಂದರಲ್ಲಿ ಹೇಳಿದರು. == ಬಿಡುಗಡೆ == ಚಲನಚಿತ್ರವು 25 ಡಿಸೆಂಬರ್ 2020 ರಂದು (ಕ್ರಿಸ್‌ಮಸ್‌ನಲ್ಲಿ) ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಯಿತು : ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳು. ಟೊರೆಂಟ್ ಸೈಟ್‌ಗಳಲ್ಲಿ ಎಚ್‌ಡಿ ಆವೃತ್ತಿಯ ಉಪಶೀರ್ಷಿಕೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ ಚಿತ್ರದ ಗಲ್ಲಾಪೆಟ್ಟಿಗೆಯ ಗಳಿಕೆಯು ಕಡಿಮೆ ಆಯಿತು, ಈ ಸೋರಿಕೆಯ ಮೂಲವನ್ನು ಮಧ್ಯಪ್ರಾಚ್ಯದಲ್ಲಿ ಪತ್ತೆಹಚ್ಚಲಾಗಿದೆ. == ಹಿನ್ನೆಲೆಸಂಗೀತ == ಹಾಡುಗಳನ್ನು ವೀರ್ ಸಮರ್ಥ್ ಮತ್ತು ಮೀಟ್ ಬ್ರೋಸ್ ಸಂಯೋಜಿಸಿದ್ದಾರೆ. ಹಿಂದಿಯಲ್ಲಿ ಕುಮಾರ್, ಮಲಯಾಳಂನಲ್ಲಿ ರಾಜೀವ್ ಅಲುಂಕಲ್, ಸಾಹೇಬ್ ಖಾನ್ ಮತ್ತು ಧನಶೇಖರ್, ತಮಿಳಿನಲ್ಲಿ ರಾಜೇಶ್ ಮಲರ್ವಣ್ಣನ್, ತೆಲುಗಿನಲ್ಲಿ ರಾಜಶ್ರೀ ಸುಧಾಕರ್ ಬರೆದರೆ, ಕನ್ನಡದಲ್ಲಿ ಜಯಂತ್ ಕಾಯ್ಕಿಣಿ, ವೀರೇಶ್ ಎಂಪಿ ಮತ್ತು ಕೃಷ್ಣ ರಿತ್ತಿ ಬರೆದಿದ್ದಾರೆ. === ಕನ್ನಡದಲ್ಲಿನ ಹಾಡುಗಳ ಪಟ್ಟಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಶಕೀಲಾ @ ಐ ಎಮ್ ಡಿ ಬಿ ಬಾಲಿವುಡ್ ಹಂಗಾಮಾದಲ್ಲಿ ಶಕೀಲಾ